Live Tuesday, October 27, 2026
Font Size:
ಸುದ್ದಿ 1 min read 10 Views
Sep 09, 2026

ಅಪಘಾತದಲ್ಲಿ ಗಾಯಗೊಂಡವರಿಗೆ ಅಬಕಾರಿ ಅಧಿಕಾರಿಗಳಿಂದ ಮಾನವೀಯ ನೆರವು

ಅಪಘಾತದಲ್ಲಿ ಗಾಯಗೊಂಡವರಿಗೆ ಅಬಕಾರಿ ಅಧಿಕಾರಿಗಳಿಂದ ಮಾನವೀಯ ನೆರವು
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಮಧುಗಿರಿ: ಮಧುಗಿರಿಯಿಂದ ಶಿರಾ ಕಡೆಗೆ ತೆರಳುವ ರಸ್ತೆಯಲ್ಲಿ ಗುಳಿಗೇನಹಳ್ಳಿ ಗ್ರಾಮದ ಸಮೀಪ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಹಾಗೂ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ವೇಳೆ ರಾತ್ರಿ ರಸ್ತೆ ಗಸ್ತು ಕರ್ತವ್ಯಕ್ಕೆ ತೆರಳುತ್ತಿದ್ದ ಮಧುಗಿರಿ ಉಪವಿಭಾಗದ ಅಬಕಾರಿ ಇಲಾಖೆಯ ಅಧಿಕಾರಿಗಳಾದ ಲಂಕೆ ಹನುಮಯ್ಯ, ಜಗದೀಶ್ ಹಾಗೂ ಶಿವರಾಜು ಅವರು ಅಪಘಾತವನ್ನು ಗಮನಿಸಿದ್ದಾರೆ.

ತಕ್ಷಣವೇ ಗಾಯಾಳುಗಳಿಗೆ ನೆರವಾಗಲು ಮುಂದಾದ ಅಧಿಕಾರಿಗಳು, ಸ್ಥಳದಲ್ಲಿ ಬೇರೆ ಯಾವುದೇ ವಾಹನಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ತಮ್ಮ ಸರ್ಕಾರಿ ವಾಹನದಲ್ಲೇ ತೀವ್ರ ರಕ್ತಸ್ರಾವವಾಗುತ್ತಿದ್ದ ಗಾಯಾಳುವನ್ನು ಶಿರಾ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಬಳಿಕ ಗಾಯಾಳುವಿನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಕರ್ತವ್ಯದ ನಡುವೆಯೂ ಅಪಘಾತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಲು ತಕ್ಷಣ ಸ್ಪಂದಿಸಿ ಆಸ್ಪತ್ರೆಗೆ ದಾಖಲಿಸಿದ ಅಬಕಾರಿ ಅಧಿಕಾರಿಗಳ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ತವ್ಯ ನಿರ್ವಹಣೆಯ ಜೊತೆಗೆ ಮಾನವೀಯತೆ ಮೆರೆದ ಅಬಕಾರಿ ಅಧಿಕಾರಿಗಳ ನಡೆ ನಿಜಕ್ಕೂ ಶ್ಲಾಘನೀಯ.